ಆತ್ಮೀಯರೆ,
               ಎಲ್ಲರಿಗೂ ನಮಸ್ಕಾರ. ಕೋಲ್ಮಿಂಚು ಎಂಬುದು ಮಳೆಗಾಲ ಕರಿಮುಗಿಲನ್ನು ಒಂದರೆಕ್ಷಣ ಝಗ್ಗನೆ ಬೆಳಗಿಸಿ ಎಲ್ಲವನ್ನೂ ಬೆಳ್ಳಂಬೆಳಕಿನಲ್ಲಿ ದರ್ಶನಮಾಡಿಸಿಬಿಡುವ ನಿಸರ್ಗದ ಬೆಳಕು. ಇದೇನೂ ಬಹುಕಾಲ ಉಳಿಯುವ ಬೆಳಕಲ್ಲ. ಆದರೆ ಅದು ತೋರಿಸಿದ ಸತ್ಯಗಳು ಬಹುಕಾಲ ನೋಡಿದವರ ಮನ:ಪಟಲದಲ್ಲಿ ನಿಂತು ಸರಣಿಯಲ್ಲಿ ಚಿಂತನೆ ಕಲ್ಪನೆ ಕಾಣ್ಕೆಗಳನ್ನು ಕಾಣಿಸುತ್ತ- ಬದುಕುತ್ತಿರುತ್ತವೆ; ಬೆಳೆಯುತ್ತಿರುತ್ತವೆ. ಮನಸ್ಸಿರುವುದರಿಂದ  ಮಾನವರು ಎಂದೆನಿಸಿಕೊಂಡವರು ನಾವು. ಮನುಷ್ಯನ ಮನಸೇ ಒಂದು ಬೆಳಕಿನ ಮೂಲ. ಅದರ ವಿಚಾರ ಸಾಮರ್ಥ್ಯವೇ ಆ ಬೆಳಕು. ಅದು  ಅಪೂರ್ವವಾದುದು. ಈ ಹಿನ್ನೆಲೆಯಲ್ಲಿ ನನ್ನ ಮನಸ್ಸಿನಲ್ಲಿ ಮೂಡಿದ ಚಿಂತನೆಗಳನ್ನು ಸಮಾನ ಮನಸ್ಕರಲ್ಲಿ ಹಂಚಿ - - ಅವರಿಂದ ಪಡೆದು ಖುಷಿಪಡುವುದು ಈ ಪುಟದ ಉದ್ದೇಶ. ನನ್ನ ಪ್ರಯತ್ನಕ್ಕೆ ತಮ್ಮೆಲ್ಲರ ಸಹಕಾರವಿರಲಿ ಎಂದು ವಿನಯಪೂರ್ವಕ ವಿನಂತಿಸಿಕೊಳ್ಳುತ್ತೇನೆ. 
                                                                                                      ಇತಿ ವಂದನೆಗಳೊಂದಿಗೆ    
                                                                                                    ಡಾ. ಕರುಣಾಕರ ನಿಡಿಂಜಿ    
                                                                                        ಮಡಿಕೇರಿ. ದಿನಾಂಕ. 18.8.17ರ ಶುಕ್ರವಾರ    

ಕಾಮೆಂಟ್‌ಗಳು